ನ್ಯೆರುತ್ಯ ಪತ್ರಿಕೆಯು ( /2015/64556) ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಆರಂಭಗೊಂಡ ಹೊಸತನದ ಕನ್ನಡ ಮಾಸ ಪತ್ರಿಕೆ. ಇದು ಶೈಕ್ಷಣಿಕ ವಿಚಾರಗಳ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಆರೋಗ್ಯ, ಯೋಗ, ವಿಜ್ಞಾನ, ಕ್ರೀಡೆ, ಸಿನಿಮಾ ಮುಂತಾದವುಗಳ ಕುರಿತಾದ ಲೇಖನಗಳನ್ನು ಒಳಗೊಂಡಿರುತ್ತದೆ. ಶೈಕ್ಷಣಿಕ ಕ್ಷೇತ್ರದ ಒಳ-ಹೊರಗೂ ಇರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ. ನಿಷ್ಪಕ್ಷಪಾತ ನಿಲುವು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ವಿಭಿನ್ನ ಬಗೆಯ ಕಥೆ, ಕವನ, ವಿಮರ್ಶೆ, ಪ್ರಚಲಿತ ವಿದ್ಯಾಮಾನಗಳನ್ನು ಇದು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳ ಕುರಿತು ನಮ್ಮ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಈ ಪತ್ರಿಕೆ ಕರ್ನಾಟಕದಾದ್ಯಂತ ಪ್ರಸಾರವನ್ನು ಹೊಂದಿದೆ. ಈ ಪತ್ರಿಕೆಯಲ್ಲಿ ಆನೇಕ ಹೊಸ ಬರಹಗಾರರ ಪ್ರತಿಭೆಯ ಅನಾವರಣಕ್ಕೆಅವಕಾಶ ನೀಡಿದೆ. ಹಾಗೆಯೆ ಪುಸ್ತಕದಡೆಗೆ ಮತ್ತೆ ಜನರನ್ನು ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ.